NewsFlow
Breaking

SIR ವಿಶೇಷ

Super Admin 1 min read 1 views
ಮಾರ್ಗ
ಮಾರ್ಗ

ಹಾಸನ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆ ಶೇ.84.61ರಷ್ಟು ಪೂರ್ಣಗೊಂಡಿದೆ. ಈವರೆಗೆ ಒಟ್ಟು 94,680 ಪತ್ತೆಯಾಗದ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್‌ ಮಾಡಲಾಗಿದೆ.


ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರದ 15,42,802 ಮತದಾರರಿದ್ದು, ಈ ಪೈಕಿ 43,264 ಮತದಾರರು ಮೃತಪಟ್ಟಿದ್ದಾರೆ. 39,485 ಮತದಾರರು ಶಾಶ್ವತವಾಗಿ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಎರಡೆರಡು ಸ್ಥಳದಲ್ಲಿ ಮತದಾನದ ಹಕ್ಕು ಹೊಂದಿದ್ದ 8,689 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ವಿಳಾಸದಲ್ಲಿಯೇ ಇಲ್ಲದಿರುವ 2946 ಹಾಗೂ ಇತರೆ 296 ಮತದಾರರ ಹೆಸರನ್ನು ಪರಿಷ್ಕರಣೆ ವೇಳೆ ಡಿಲೀಟ್‌ ಮಾಡಲಾಗಿದೆ. ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗಿದ್ದಲ್ಲಿ ಆಕ್ಷೇಪಣೆ ದಾಖಲಿಸಿ ಅರ್ಜಿ ನಮೂನೆ -6 ರಲ್ಲಿಸಲ್ಲಿಸಿ ಪಟ್ಟಿಗೆ ಸೇರಿಸಬಹುದಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಲತಾಕುಮಾರಿ.

ಹಾಸನದಲ್ಲಿ ಹೆಚ್ಚು:
ಹಾಸನ ವಿಧಾನಸಭೆ ಕ್ಷೇತ್ರದಲ್ಲಿಅತಿ ಹೆಚ್ಚು 16,712 ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಶ್ರವಣಬೆಳಗೊಳದಲ್ಲಿ14,278, ಅರಸೀಕೆರೆ ಕ್ಷೇತ್ರದಲ್ಲಿ 9,496, ಬೇಲೂರು 12,267, ಹೊಳೆನರಸೀಪುರ 14331, ಅರಕಲಗೂಡು 15,569, ಸಕಲೇಶಪುರ ಕ್ಷೇತ್ರದಲ್ಲಿ12027 ಮತದಾರರು ಸೇರಿ 94,680 ಮತದಾರರ ಹೆಸರು ಕೈಬಿಡಲಾಗಿದೆ. ಈ ಸಂಖ್ಯೆ ಇನ್ನು ಅಧಿಕವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಸವಾಲು:
ಮತದಾರರ ಪಟ್ಟಿಯ ಎನ್ಯುಮರೇಷನ್‌ ಅರ್ಜಿಯನ್ನು ಮನೆ ಬಾಗಿಲಿಗೆ ಸಲ್ಲಿಸಿ ವಾರ ಕಳೆಯುತ್ತಾ ಬಂದರೂ ಕೆಲವರು ಭರ್ತಿ ಮಾಡಿಲ್ಲ. ಹೀಗಾಗಿ ಬಿಎಲ್‌ಒಗಳೇ ಸಮಗ್ರ ಮಾಹಿತಿ ಪಡೆದು ಭರ್ತಿ ಮಾಡುವ ಅನಿವಾರ್ಯತೆ ಎದುರಾಗಿದೆ. ಅಷ್ಟೇ ಅಲ್ಲದೆ ಒಂದಿಷ್ಟು ಜನ ಈ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂಬ ಸಂಗತಿ ಪ್ರಕ್ರಿಯೆ ವೇಳೆ ಕಂಡುಬಂದಿದೆ ಎನ್ನುತ್ತಿದ್ದಾರೆ ಸಿಬ್ಬಂದಿ.

ಬದುಕು ಕಟ್ಟಲು ಎಸ್.ಐ.ಆರ್ ಸಾಧ್ಯವಿಲ್ಲ.

ವಿಳಾಸದಲ್ಲಿಇಲ್ಲ:
ಮತದಾರರು ವಿಳಾಸದಲ್ಲಿ ಇಲ್ಲದಿರುವವರನ್ನು ಪತ್ತೆ ಮಾಡುವುದು ಬಿಎಲ್‌ಒಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಕ್ಕ ಪಕ್ಕದವರನ್ನು ಕೇಳಿದರೆ ಅವರು ಇಲ್ಲಿಂದ ಹೋಗಿ ಹಲವಾರು ವರ್ಷಗಳೇ ಆಗಿದೆ. ಎಲ್ಲಿಹೋಗಿದ್ದಾರೋ ಗೊತ್ತಿಲ್ಲ, ಇಲ್ಲವೇ ಬದುಕಿದ್ದಾರೆಯೇ ಎಂಬುದು ನಿಖರವಿಲ್ಲ ಎಂಬ ಉತ್ತರವೂ ಬರುತ್ತಿದೆ. ಹೀಗಾಗಿ ಹಲವು ಬಾರಿ ಮನೆ ಬಾಗಿಲಿಗೆ ಹೋಗಿ ಹಿಂತಿರುಗುವ ಜತೆಗೆ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟುಹೋಗಬಾರದು ಎಂಬ ಉದ್ದೇಶದಿಂದ ಎಲ್ಲಿಯಾದರೂ ಇದ್ದಾರೆಯೇ ಎಂದು ಪತ್ತೆಮಾಡುವ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ಸಿಬ್ಬಂದಿ.

ಪಕ್ಷಗಳ ಸಹಕಾರ:
ಪ್ರಮುಖ ಪಕ್ಷ ಬಿಜೆಪಿ, ಜೆಡಿಎಸ್‌ನ ಪಾಲಿಕೆ ಸದಸ್ಯರು, ಸ್ಥಳೀಯ ಸಂಸ್ಥೆ ಹಾಗೂ ಪಕ್ಷದ ಮುಖಂಡರು ತಮ್ಮ ವಾರ್ಡಿನ, ಊರಿನ, ಗ್ರಾಮದ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ತಾಲೂಕು- ಒಟ್ಟು ಮತದಾರರು- ಮೃತರು - ಶಾಶ್ವತ ಸ್ಥಳಾಂತರ
ಶ್ರವಣಬೆಳಗೊಳ- 214454- 7228- 5398
ಅರಸೀಕೆರೆ - 221014 -3741 - 4669
ಬೇಲೂರು -204786- 6355- 4717
ಹಾಸನ- 235943- 6429- 6894
ಹೊಳೆನರಸೀಪುರ- 224676- 8790 -6425
ಅರಕಲಗೂಡು- 236667 -4292 -5225
ಸಕಲೇಶಪುರ- 205262 -43,264 -6157
ಒಟ್ಟು -1542802- (ಒಟ್ಟು ಡಿಲೀಟ್‌- 94,680)

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮೃತರು, ವಿಳಾಸದಲ್ಲಿ ಪತ್ತೆಯಾಗದವರು, ಎರಡು ಸ್ಥಳದಲ್ಲಿ ಮತದಾನದ ಹಕ್ಕು ಹೊಂದಿರುವ 94,680 ಸಾವಿರ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್‌ ಮಾಡಲಾಗುವುದು. ಜಿಲ್ಲೆಯಲ್ಲಿ ಇನ್ನು 1.50 ಲಕ್ಷಕ್ಕೂ ಹೆಚ್ಚು ಮಂದಿ ಎನ್ಯುಮರೇಷನ್‌ ಅರ್ಜಿಯನ್ನು ಹಿಂತಿರುಗಿಸಿಲ್ಲ. ಮತದಾರರು ಅರ್ಜಿಯನ್ನು ದಯವಿಟ್ಟು ಹಿಂತಿರುಗಿಸಬೇಕು. ಮಾಹಿತಿ ಇಲ್ಲವಾದರೂ ವಾಪಸ್‌ ಕೊಡಿ. ನಮ್ಮ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ ಎಂದಿದ್ದಾರೆ ಲತಾಕುಮಾರಿ ಜಿಲ್ಲಾಧಿಕಾರಿ, ಜಿಲ್ಲಾಚುನಾವಣಾಧಿಕಾರಿ ಹಾಸನ.

Super Admin

Read more articles from this author.

Related Articles

0 Comments

Leave a comment

Join Our Whatsapp Group